ರಾಜ್ಯದಲ್ಲಿ 13 ಜನರು ಕೂಡ ಕೋವಿಡ್19; ಮೂವರು ಗುಣಮುಖರಾದರು

70

ಕಾಸರ್‌ಗೋಡ್ : ಕೇರಳದಲ್ಲಿ 13 ಜನರಿಗೆ ಕೂಡ ಕೋವಿಡ್ 19 ದೃಡಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು. ಈ ಪೈಕಿ ಒಂಬತ್ತು ಮಂದಿ ಕಾಸರ್‌ಗೋಡ್ ಜಿಲ್ಲೆಯವರು,ಇಬ್ಬರು ಮಲಪ್ಪುರಂ ನಿಂದ, ಕೊಲ್ಲಂ ಮತ್ತು ಪಥನಮತ್ತಿಟ್ಟ ಜಿಲ್ಲೆಗಳಿಂದ ತಲಾ ಒಬ್ಬೊಬ್ಬರು ರೋಗಕ್ಕೆ ಒಳಗಾಗಿದ್ದಾರೆ. ಕಾಸರ್‌ಗೋಡ್ ಜಿಲ್ಲೆಯಲ್ಲಿ ಆರು ಜನರು ವಿದೇಶದಿಂದ ಬಂದಿವರೂ, ಇತರ ಮೂವರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. ಮಲಪ್ಪುರಂ ಮತ್ತು ಕೊಲ್ಲಂ ಜಿಲ್ಲೆಗಳ ಜನರು ನಿಜಾಮುದ್ದೀನ್ ನಿಂದ ಬಂದವರು. ಪಥನಮತ್ತಿಟ್ಟಾದ ವ್ಯಕ್ತಿ ವಿದೇಶದಿಂದ ಬಂದವರು.

ಕೇರಳದಲ್ಲಿ ಈವರೆಗೆ 327 ಜನರಿಗೆ ರೋಗ ದೃಡಪಡಿಸಲಾಗಿದೆ. ಮೂರು ಜನರ ಪರಿಶೋಧನೆ ಫಲಿತಾಂಶ ಇಂದು ನಕಾರಾತ್ಮಕವಾಗಿದೆ. ಕೊಲ್ಲಂ, ತ್ರಿಶೂರ್ ಮತ್ತು ಕಣ್ಣೂರು ಜಿಲ್ಲೆಗಳಲ್ಲಿರುವವರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿದ್ದು . ಪ್ರಸ್ತುತ, 266 ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಒಟ್ಟು 59 ಜನರನ್ನು ರೋಗ ಮುಕ್ತಿ ಹೊಂದಿ ಡಿಸ್ಚಾರ್ಜ್ ಮಾಡಲಾಗಿದೆ. ಇಬ್ಬರು ಈ ಹಿಂದೆ ಮೃತಪಟ್ಟಿದ್ದರು.

208 ದೇಶಗಳಲ್ಲಿ ಕೋವಿಡ್ 19 ರ ಹರಡುವಿಕೆಯಿಂದಲೂ ಮತ್ತು ಕೇರಳದಲ್ಲಿ ರೋಗಿಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿಯೂ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 1,52,804 ಜನರು ನಿರೀಕ್ಷಣದಲ್ಲಿರುವರು. ಈ ಪೈಕಿ 1,52,009 ಜನರು ಮನೆಗಳಲ್ಲಿ ಮತ್ತು 795 ಜನರು ಆಸ್ಪತ್ರೆಗಳಲ್ಲಿ ನಿರೀಕ್ಷಣದಲ್ಲಿರುವರು. ಒಟ್ಟು 122 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ರೋಗಲಕ್ಷಣಗಳನ್ನು ಹೊಂದಿರುವ 10,716 ವ್ಯಕ್ತಿಗಳ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇದರಲ್ಲಿ ಲಭ್ಯವಾದ 9,607 ಮಾದರಿಗಳ ಫಲಿತಾಂಶಗಳು ನಕಾರಾತ್ಮಕವಾಗಿವೆ.

NO COMMENTS